Pages

Tuesday, June 22, 2010




..
ನನ್ನೆದುರು ನೀ ದಿನವೂ
ಬಾರದಿರೆ ಏನಂತೆ...??
ಕಣ್ಣಿನಲಿ ಸೆರೆಯಾದ
ನಿನ್ನದೇ ಚಿತ್ರವಿದೆ ...
ನಿನ್ನ ನೆನಪು ಜೊತೆಯಿರಲು
ಮುಷ್ಠಿಯಲೇ ಜಗವಿದೆ...
ಅದಕ್ಕೇ ಇರಬೇಕು...
ನೀನಲ್ಲಿ ದೀಪ ಬೆಳಗಿದರೆ..
ಇಲ್ಲಿ ಹೊಂಬೆಳಕು...!!
..


ನನ್ನೊಡನೆ ನೀ ಮಾತ
ಆಡದಿರೆ ಏನಂತೆ..??
ನನ್ನ ಹೄದಯದಲ್ಲಿ
ನಿನ್ನಯ ಪ್ರೀತಿಯ ಮಾತಿದೆ
ಕವಿತೆಯ ಪ್ರತಿ ಸಾಲಿನಲೂ
ಪದವಾಗಿ ಅವಿತಿದೆ...
ಅದಕ್ಕೇ ಇರಬೇಕು...
ನೀನಲ್ಲಿ ಮಾತುನುಡಿದರೆ
ನನ್ನ್ ಕಣ್ಣಲ್ಲಿ ಮುತ್ತಿನಾ ಕಣ್ಣಿರು ಬರುವುದು...

...
ನನ್ನಿಂದ ದೂರ..
ನೀನಿದ್ದರೆ ಏನಂತೆ...??
ನನ್ನ ಉಸಿರಲ್ಲಿ,
ನಿನ್ನದೇ ಉಸಿರಿದೆ...
ಬಾಳ ಪ್ರತಿ ಪುಟದಲೂ
ನಿನ್ನದೇ ಹೆಸರಿದೆ...
ಅದಕ್ಕೇ ಇರಬೇಕು...
ನಿನ್ನ ಮನೆಯಂಗಳದಿ ಮಳೆ ಸುರಿದರೆ..
ಇಲ್ಲಿ ತಂಗಾಳಿ...!!

No comments: