Pages

Sunday, July 10, 2016

ಹೋಗೆ...

ನಿನ್ನ್ ತುಂಟ ನಗೆ
ಹುಚ್ಚು ಹಿಡಿಸೂತು ಎನಗೆ
ಕಾಯುತ್ತಾ ಕೂತೆ ನಿನಗೆ
ಆಗ ಗೊತ್ತಾಯ್ತು ಆಗಿದೆ ನಿನಗೆ ಮಧುವೆ

ಈಗ ಈರುವದು, ಒಂದೆ ನನಗೆ ಅದು ಹೋಗೆ ಹೋಗೆ... ಹೋಗೆ

Wednesday, June 23, 2010

ನಿರ್ಧಾರ


ಮಿತಿಯಿಲ್ಲದಂತೆ

ಮತ್ತನೇರಿಸುವ

ನಿನ್ನ ನೋಟದ ನಶೆ ಜಾಮಿನಲ್ಲಿ..


ಮೈ-ಮನದ ತುಂಬ

ಕುಣಿದೆದ್ದು ಸಂಚರಿಸಿದ

ಭಾವನೆಗಳ ಟ್ರಾಫಿಕ್ ಜಾಮಿನಲ್ಲಿ..


ಮನದ ಮಳಿಗೆಯಲಿ

ಒಪ್ಪವಾಗಿ ಜೋಡಿಸಿಟ್ಟ

ನಿನ್ನ ನೆನಪ ಸರಂಜಾಮಿನಲ್ಲಿ..


ಮಿಲನವೋ-ಅಗಲಿಕೆಯೊ

ಜೀವನವೋ-ಮರಣವೋ

ತಿಳಿಯದ ಅಂಜಾಮಿನಲ್ಲಿ...


ಕಳೆದು ಹೋಗಿದ್ದೇನೆ...!




ಬರುವುದೋ ಬಿಡುವುದೋ

ನಿರ್ಧಾರ ನಿನಗೆ ಬಿಟ್ಟಿದ್ದು...

ಹೋಗುವ ಮುನ್ನ

ನಿನ್ನೆದೆಯ ಪುಟಗಳಲಿ

ನನ್ನ ವಿಳಾಸ

ಬರೆದು ಹೋಗಿದ್ದೇನೆ...!!

Tuesday, June 22, 2010




..
ನನ್ನೆದುರು ನೀ ದಿನವೂ
ಬಾರದಿರೆ ಏನಂತೆ...??
ಕಣ್ಣಿನಲಿ ಸೆರೆಯಾದ
ನಿನ್ನದೇ ಚಿತ್ರವಿದೆ ...
ನಿನ್ನ ನೆನಪು ಜೊತೆಯಿರಲು
ಮುಷ್ಠಿಯಲೇ ಜಗವಿದೆ...
ಅದಕ್ಕೇ ಇರಬೇಕು...
ನೀನಲ್ಲಿ ದೀಪ ಬೆಳಗಿದರೆ..
ಇಲ್ಲಿ ಹೊಂಬೆಳಕು...!!
..


ನನ್ನೊಡನೆ ನೀ ಮಾತ
ಆಡದಿರೆ ಏನಂತೆ..??
ನನ್ನ ಹೄದಯದಲ್ಲಿ
ನಿನ್ನಯ ಪ್ರೀತಿಯ ಮಾತಿದೆ
ಕವಿತೆಯ ಪ್ರತಿ ಸಾಲಿನಲೂ
ಪದವಾಗಿ ಅವಿತಿದೆ...
ಅದಕ್ಕೇ ಇರಬೇಕು...
ನೀನಲ್ಲಿ ಮಾತುನುಡಿದರೆ
ನನ್ನ್ ಕಣ್ಣಲ್ಲಿ ಮುತ್ತಿನಾ ಕಣ್ಣಿರು ಬರುವುದು...

...
ನನ್ನಿಂದ ದೂರ..
ನೀನಿದ್ದರೆ ಏನಂತೆ...??
ನನ್ನ ಉಸಿರಲ್ಲಿ,
ನಿನ್ನದೇ ಉಸಿರಿದೆ...
ಬಾಳ ಪ್ರತಿ ಪುಟದಲೂ
ನಿನ್ನದೇ ಹೆಸರಿದೆ...
ಅದಕ್ಕೇ ಇರಬೇಕು...
ನಿನ್ನ ಮನೆಯಂಗಳದಿ ಮಳೆ ಸುರಿದರೆ..
ಇಲ್ಲಿ ತಂಗಾಳಿ...!!

Sunday, June 20, 2010

ನಿನ್ನ ಬಿಟ್ಟು ನನಗೆ ಬಾಳಕ್ಕಾಗೋಲ್ಲಾ ಅಂತಲ್ಲ .........




ಸದಾ ನಿನ್ನದೇ ಧ್ಯಾನ
ಅಂತೇನೂ ಅಲ್ಲ
ನಿನ್ನ ಬಿಟ್ಟು ಬೇರೇನೂ
ನೆನಪಾಗೋಲ್ಲ ಅಷ್ಟೇ

ನಿನ್ನ ಬಗ್ಗೆನೇ ಪದ್ಯ
ಬರಿತೀನಿ ಅಂತಲ್ಲ
ಬರೆದ ಪದ್ಯದಲ್ಲೆಲ್ಲಾ
ನೀನಿರ್ತಿಯ ಅಷ್ಟೇ

ಕಣ್ಮುಚ್ಚಿ ದಿನಾ ನಾನು
ನಿದ್ದೆ ಮಾಡ್ತೀನಿ ಅಂತಲ್ಲ
ಕಣ್ಬಿಟ್ಟರೆ ಮಾಯವಾಗ್ತೀಯಾ
ಅನ್ನೋ ಭಯ ಅಷ್ಟೇ

ನಿನ್ನ ಬಿಟ್ಟು ನನಗೆ
ಬಾಳಕ್ಕಾಗೋಲ್ಲಾ ಅಂತಲ್ಲ
ಅರ್ಥವಿಲ್ಲದೇ ಬಾಳಬೇಕಲ್ಲಾ
ಅನ್ನೋ ಬೇಜಾರು ಅಷ್ಟೇ!!!!!!!

Saturday, June 19, 2010

ಅನ್ವೇಷಣೆ




ನೆನಪುಗಳ ಅಲೆಯಲ್ಲಿ
ನಿರ್ಧಾರಗಳ ಮರೆಯಲ್ಲಿ
ಕಂಬನಿಯ ಸೆರೆಯಲ್ಲಿ
ನಿಜದ ಮನದರಸಿಗಾಗಿ
ನಡೆದಿದೆ ಅನ್ವೇಷಣೆ

ಇದು ಪ್ರೀತಿಯ ಅನ್ವೇಷಣೆ ................

Thursday, June 17, 2010

ಜೋಗದ ಜಲಪತಾ


"ಹಠ ತೊಟ್ಟು ನಿಂತಿದ್ದೇನೆ ಬಿಟ್ಟು ಹೋದ ನಿನ್ನ ಮರೆಯಲೇಬೇಕೆಂದು ಆದರೂ ಬಿಡದೇ ಕಾಡುವ ನೆನಪು ಸುಳಿದಾಡುತ್ತದೆ ಜೊಗದ ಜಲಾಪಾತದಲ್ಲಿ ಘಳಿಗೆಗೊಮ್ಮೆ ಮೂಡುವ ಕಾಮನಬಿಲ್ಲಂತೆ"

Wednesday, June 16, 2010




ಬರಗಾಲದ ಜನತೆಯ
ಬಾಲಿನಲ್ಲಿ ಅರಳುವ ಬಿಲಿ ಗುಲಾಬಿ ಆ ನಿನ್ನ ನಗು!!!
ಹವಲದ ಕೆಂದುಟಿಯ
ಕಣ ಕಣದಲ್ಲಿ ತೇಲುವ ಚೆಲುವು ಆ ನಿನ್ನ ನಗು!!!!
ಕವಿಯ ಕಲ್ಪನೆಯ
ಕವನದಲ್ಲಿ ಹೊಮ್ಮುವಾ ಹೊಂಗನಸ್ಸು ಆ ನಿನ್ನ ನಗು!!!

ಕಂದಮ್ಮಗಳ ಮುಗ್ದ ಕೆನ್ನೆಯ ಉಬ್ಬುಗಳಲ್ಲಿ ಉಕ್ಕುವಾ ಹುಮ್ಮಸ್ಸು ನೀನ್ನಾ ಆ ನಗು.

ನಿನ್ನಾ ಆ ನಗುವಿಗೆ,
ಮುರುಕು ಗುಡಿಸಲನ ಮೂಲೆಯಲ್ಲಿ ಮಿನುಗುವ ಮಿಂಚು ಹುಲು ಕೂಡ ನಾಚಿ ಮಿಂಚುವದನ್ನೆ ಮರೆಥು ಹೊಗುತ್ತೆ.
ನಿನ್ನಾ ಆ ಚೆಲುವಾ ನಗುವಿಗೆ ನನ್ನ ಜೀವನದ ನಗುವನ್ನೇ ಮರೆತು ಹೋದೆ ನಾ?????