Pages

Sunday, June 20, 2010

ನಿನ್ನ ಬಿಟ್ಟು ನನಗೆ ಬಾಳಕ್ಕಾಗೋಲ್ಲಾ ಅಂತಲ್ಲ .........




ಸದಾ ನಿನ್ನದೇ ಧ್ಯಾನ
ಅಂತೇನೂ ಅಲ್ಲ
ನಿನ್ನ ಬಿಟ್ಟು ಬೇರೇನೂ
ನೆನಪಾಗೋಲ್ಲ ಅಷ್ಟೇ

ನಿನ್ನ ಬಗ್ಗೆನೇ ಪದ್ಯ
ಬರಿತೀನಿ ಅಂತಲ್ಲ
ಬರೆದ ಪದ್ಯದಲ್ಲೆಲ್ಲಾ
ನೀನಿರ್ತಿಯ ಅಷ್ಟೇ

ಕಣ್ಮುಚ್ಚಿ ದಿನಾ ನಾನು
ನಿದ್ದೆ ಮಾಡ್ತೀನಿ ಅಂತಲ್ಲ
ಕಣ್ಬಿಟ್ಟರೆ ಮಾಯವಾಗ್ತೀಯಾ
ಅನ್ನೋ ಭಯ ಅಷ್ಟೇ

ನಿನ್ನ ಬಿಟ್ಟು ನನಗೆ
ಬಾಳಕ್ಕಾಗೋಲ್ಲಾ ಅಂತಲ್ಲ
ಅರ್ಥವಿಲ್ಲದೇ ಬಾಳಬೇಕಲ್ಲಾ
ಅನ್ನೋ ಬೇಜಾರು ಅಷ್ಟೇ!!!!!!!

No comments: